Public App Logo
Profile Picture

Yadgir News 7353702080

@mdrafiq790
40Followers
1Following
*ಜಲ್ಲಿಯೂ ಇಲ್ಲ ಇಂಜಿನಿಯರ್ ಕೂಡ ಇಲ್ಲ ನಂದಿಗುಂದದಲ್ಲಿ ಕಳಪೆ ರಸ್ತೆ ಕಾಮಗಾರಿ ತಡೆದ ಕರವೇ ಸ್ವಾಭಿಮಾನಿ ಸೇನೆ ಮತ್ತು ನಂದಿಗುಂದ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ*
----------
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂದಿಗುಂದ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಇಲಾಖೆಯ ವತಿಯಿಂದ ಕೈಗೊಳ್ಳಲಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟ ಎದ್ದು ಕಂಡ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು ಜಂಟಿಯಾಗಿ ಪ್ರತಿಭಟಿಸಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ.

ನಂದಿಗುಂದ ಗ್ರಾಮದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಜೆ 6 ಗಂಟೆಯ ನಂತರ ರಸ್ತೆ ಕಾಂಕ್ರೀಟೀಕರಣ ಕೆಲಸವನ್ನು ಆರಂಭಿಸಲಾಗಿತ್ತು. ಸ್ಥಳದಲ್ಲಿ ಯಾವುದೇ ಜವಾಬ್ದಾರಿಯುತ KRIDL ಅಧಿಕಾರಿಗಳಾಗಲಿ, ಇಂಜಿನಿಯರ್ ಆಗಲಿ ಅಥವಾ ಗುತ್ತಿಗೆದಾರರಾಗಲಿ ಇರಲಿಲ್ಲ. ಇನ್ನು ಆತಂಕಕಾರಿ ವಿಷಯವೆಂದರೆ, ಇಂಜಿನಿಯರ್ ಫೋನ್ ಮೂಲಕ ಸಂಪರ್ಕಿಸಿದಾಗ ತಮಗೆ ಇಂತಹದ್ದೊಂದು ರಸ್ತೆ ಕಾಮಗಾರಿ ನಡೆಯುತ್ತಿರುವುದೇ ಗೊತ್ತಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಅಧಿಕಾರಿಗಳ ಸಮ್ಮತಿಯಿಲ್ಲದೆ ರಾತ್ರೋರಾತ್ರಿ ರಹಸ್ಯವಾಗಿ ಈ ಕಾಮಗಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಾಗ ಸಿಮೆಂಟ್‌ನಲ್ಲಿರುವ ತೇವಾಂಶ ಮತ್ತು ಗಟ್ಟಿ ದ್ರಾವಣವನ್ನು ಮಣ್ಣು ಹೀರಿಕೊಳ್ಳಬಾರದು ಎಂಬ ತಾಂತ್ರಿಕ ಕಾರಣಕ್ಕಾಗಿ ತಳಭಾಗದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಶೀಟ್ ಅಳವಡಿಸಬೇಕು. ಜೊತೆಗೆ ರೋಲರ್ ಮೂಲಕ ಜಲ್ಲಿ ಕಲ್ಲುಗಳನ್ನು ಹಾಸಿ ತಳಪಾಯ ಗಟ್ಟಿಗೊಳಿಸಬೇಕು. ಆದರೆ ಇಲ್ಲಿ ಯಾವುದೇ ನಿಯಮ ಪಾಲಿಸದೆ, ಕನಿಷ್ಠ ಪ್ಲಾಸ್ಟಿಕ್ ಶೀಟ್ ಕೂಡ ಹಾಕದೆ ಬರಿ ಮಣ್ಣಿನ ಮೇಲೆಯೇ ನೇರವಾಗಿ ಕಾಂಕ್ರೀಟ್ ಮಿಶ್ರಣವನ್ನು ಸುರಿಯಲಾಗುತ್ತಿತ್ತು. ಇಂತಹ ಕಳಪೆ ತಂತ್ರಜ್ಞಾನದಿಂದಾಗಿ ರಸ್ತೆ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟು ಹಾಳಾಗುವುದು ಸ್ಪಷ್ಟವಾಗಿದ್ದು, ಸಾರ್ವಜನಿಕರ ತೆರಿಗೆ ಹಣದಲ್ಲಿ ಇಂತಹ ಕಳಪೆ ಕಾಮಗಾರಿ ಮಾಡುವುದು ಎಷ್ಟು ಸರಿ?" ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ.

ರಾತ್ರಿ ವೇಳೆ ನಡೆಯುತ್ತಿದ್ದ ಈ ಕಳಪೆ ಕಾಮಗಾರಿಯ ಕುರಿತು ಮಾಹಿತಿ ಪಡೆದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಹಾಗೂ ನಂದಿಗುಂದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತರಾಟೆಗೆ ತೆಗೆದುಕೊಂಡರು. "ಯಾರ ಅನುಮತಿಯೊಂದಿಗೆ, ಯಾವ ಇಂಜಿನಿಯರ್ ಉಸ್ತುವಾರಿಯಲ್ಲಿ ಈ ಕಳಪೆ ರಸ್ತೆ ಮಾಡಲಾಗುತ್ತಿದೆ?" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸ್ಥಳದಲ್ಲೇ ಕಾಮಗಾರಿಯನ್ನು ಅರ್ಧಕ್ಕೆ ತಡೆದು ನಿಲ್ಲಿಸಿದರು.

"ಈಗಾಗಲೇ ಮಣ್ಣಿನ ಮೇಲೆ ನಿಯಮಬಾಹಿರವಾಗಿ ಮಾಡಲಾಗಿರುವ ಕಳಪೆ ರಸ್ತೆಯನ್ನು ನಾಳೆಯೇ ಜೆಸಿಬಿ ಬಳಸಿ ಸಂಪೂರ್ಣವಾಗಿ ತೆರವುಗೊಳಿಸಬೇಕು. ಆ ಜಾಗದಲ್ಲಿ ಹೊಸದಾಗಿ ಪ್ಲಾಸ್ಟಿಕ್ ಶೀಟ್ ಅಳವಡಿಸಿ, ಉತ್ತಮ ಗುಣಮಟ್ಟದ ಜಲ್ಲಿ ಹಾಗೂ ಸಿಮೆಂಟ್ ಬಳಸಿ ಕಾಂಕ್ರೀಟ್ ರಸ್ತೆಯನ್ನು ಮರುನಿರ್ಮಾಣ ಮಾಡಿಕೊಡಬೇಕು" ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮಸ್ಥರು ಕಟ್ಟುನಿಟ್ಟಿನ ಪಟ್ಟು ಹಿಡಿದಿದ್ದಾರೆ 

ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು ಸಂಚು ರೂಪಿಸಿ, ರಾತ್ರಿ ಹೊತ್ತು ಕಳಪೆ ಕಾಮಗಾರಿ ನಡೆಸಿದ KRIDL ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಗ್ರಾಮಸ್ಥರು ಹಾಗೂ ಕರವೇ ಸ್ವಾಭಿಮಾನಿ ಸೇನೆ ನಿರ್ಧರಿಸಿದೆ. 
ಈ ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ಶೀಘ್ರದಲ್ಲೇ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ ಮಹೇಶ್ ಶರ್ಮಾ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ ‘ಉರ್ದು ಹಬ್ಬ’: ನವೆಂಬರ್ 9ರಂದು ವಿಶೇಷ ಕಾರ್ಯಕ್ರಮ
ಬೆಂಗಳೂರು: ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾ ಪರಂಪರೆಯನ್ನು ರಾಜ್ಯದ ವಿವಿಧ ಸಮುದಾಯಗಳಿಗೆ ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ನವೆಂಬರ್ 9ರಂದು ಉರ್ದು ದಿನಾಚರಣೆ ಅಂಗವಾಗಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
‘ಕರ್ನಾಟಕ ಪರ್ವ 2026’ರ ನಾಲ್ಕನೇ ದಿನ ಉರ್ದು ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಉರ್ದು ಭಾಷೆ ಮತ್ತು ಸಾಹಿತ್ಯದ ಜೊತೆಗೆ ಆ ಭಾಷೆಯೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿ, ಪರಂಪರೆ ಹಾಗೂ ವಿವಿಧ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಈಗಾಗಲೇ ವಿವಿಧ ಇಲಾಖೆಗಳು ಹಾಗೂ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಉರ್ದು ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ದೊಡ್ಡ ಮಟ್ಟದ ಕಾರ್ಯಕ್ರಮವನ್ನೂ ವಿಧಾನಸೌಧದಂತಹ ಪ್ರಮುಖ ಸ್ಥಳದಲ್ಲಿ ಆಯೋಜಿಸಬಹುದು ಎಂಬ ಚಿಂತನೆಯೊಂದಿಗೆ ಈ ಕಾರ್ಯಕ್ರಮದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಸಾಹಿತ್ಯದ ಜೊತೆಗೆ ಸಂಸ್ಕೃತಿಗೂ ಆದ್ಯತೆ
ಪ್ರಸ್ತಾವಿತ ‘ಉರ್ದು ಹಬ್ಬ’ವನ್ನು ಕೇವಲ ಸಾಹಿತ್ಯ ಕಾರ್ಯಕ್ರಮವಾಗಿ ಸೀಮಿತಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಉರ್ದು ಭಾಷೆಯ ಸಾಹಿತ್ಯದ ಜೊತೆಗೆ ಅದರ ಸಂಸ್ಕೃತಿ, ಪರಂಪರೆ, ಪುಸ್ತಕಗಳು, ಆಹಾರ ಪದ್ಧತಿ ಹಾಗೂ ವಿವಿಧ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು.
ಉರ್ದು ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿರುವ ಸಾಹಿತ್ಯ, ಕವಿತೆ, ಬರಹಗಾರರು ಹಾಗೂ ವಿವಿಧ ಸಾಂಸ್ಕೃತಿಕ ಅಂಶಗಳನ್ನು ಜನರಿಗೆ ಪರಿಚಯಿಸಲು ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸುವ ಕುರಿತು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿರುವ ಈ ಕಾರ್ಯಕ್ರಮದ ಮೂಲಕ ಉರ್ದು ಭಾಷೆ ಮತ್ತು ಅದರ ಸಾಂಸ್ಕೃತಿಕ ಹಿನ್ನೆಲೆಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿವಿಧ ಸಮುದಾಯಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರೂಪಿಸುವ ಉದ್ದೇಶವೂ ಇದೆ ಎಂದು ಸಚಿವರು ತಿಳಿಸಿದರು.
ಒಟ್ಟಿನಲ್ಲಿ, ನವೆಂಬರ್ 9ರ ಉರ್ದು ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ನಡೆಯಲಿರುವ ‘ಉರ್ದು ಹಬ್ಬ’ವು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಹಾರ ಮತ್ತು ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

<nis:link nis:type=tag nis:id=ಉರ್ದುಹಬ್ಬ nis:value=ಉರ್ದುಹಬ್ಬ nis:enabled=true nis:link/> <nis:link nis:type=tag nis:id=ಉರ್ದುದಿನ nis:value=ಉರ್ದುದಿನ nis:enabled=true nis:link/> <nis:link nis:type=tag nis:id=ವಿಧಾನಸೌಧ nis:value=ವಿಧಾನಸೌಧ nis:enabled=true nis:link/> <nis:link nis:type=tag nis:id=ಕರ್ನಾಟಕ nis:value=ಕರ್ನಾಟಕ nis:enabled=true nis:link/> <nis:link nis:type=tag nis:id=ಕರ್ನಾಟಕಪರ್ವ2026 nis:value=ಕರ್ನಾಟಕಪರ್ವ2026 nis:enabled=true nis:link/> <nis:link nis:type=tag nis:id=ಉರ್ದುಭಾಷೆ nis:value=ಉರ್ದುಭಾಷೆ nis:enabled=true nis:link/> <nis:link nis:type=tag nis:id=ಉರ್ದುಸಾಹಿತ್ಯ nis:value=ಉರ್ದುಸಾಹಿತ್ಯ nis:enabled=true nis:link/> <nis:link nis:type=tag nis:id=ಉರ್ದುಸಂಸ್ಕೃತಿ nis:value=ಉರ್ದುಸಂಸ್ಕೃತಿ nis:enabled=true nis:link/> <nis:link nis:type=tag nis:id=ಬೆಂಗಳೂರು nis:value=ಬೆಂಗಳೂರು nis:enabled=true nis:link/> <nis:link nis:type=tag nis:id=ಯುಟಿಖಾದರ್ nis:value=ಯುಟಿಖಾದರ್ nis:enabled=true nis:link/> <nis:link nis:type=tag nis:id=ಸರ್ಕಾರ nis:value=ಸರ್ಕಾರ nis:enabled=true nis:link/>

<nis:link nis:type=tag nis:id=urduhabba nis:value=UrduHabba nis:enabled=true nis:link/> <nis:link nis:type=tag nis:id=urduday nis:value=UrduDay nis:enabled=true nis:link/> <nis:link nis:type=tag nis:id=vidhanasoudha nis:value=VidhanaSoudha nis:enabled=true nis:link/> <nis:link nis:type=tag nis:id=karnataka nis:value=Karnataka nis:enabled=true nis:link/> <nis:link nis:type=tag nis:id=karnatakaparva2026 nis:value=KarnatakaParva2026 nis:enabled=true nis:link/> <nis:link nis:type=tag nis:id=urdulanguage nis:value=UrduLanguage nis:enabled=true nis:link/> <nis:link nis:type=tag nis:id=urduliterature nis:value=UrduLiterature nis:enabled=true nis:link/> <nis:link nis:type=tag nis:id=urduculture nis:value=UrduCulture nis:enabled=true nis:link/> <nis:link nis:type=tag nis:id=bengaluru nis:value=Bengaluru nis:enabled=true nis:link/> <nis:link nis:type=tag nis:id=utkhader nis:value=UTKhader nis:enabled=true nis:link/> <nis:link nis:type=tag nis:id=karnatakagovernment nis:value=KarnatakaGovernment nis:enabled=true nis:link/> <nis:link nis:type=tag nis:id=urdufestival nis:value=UrduFestival nis:enabled=true nis:link/>
ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ PSI ಬಂಧನ !
MRPL ದುರಂತದಲ್ಲಿ ಸ್ಥಳೀಯ ಯುವಕ ಮನೀಶ್ ಕರ್ಕಡ ಮೃತ್ಯು

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಸಂಭವಿಸಿದ ದುರಂತದಲ್ಲಿ ಕಿನ್ನಿಗೋಳಿ ಮೂಲದ ಸ್ಥಳೀಯ ಯುವಕ ಹಾಗೂ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರು ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

MRPLನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮನೀಶ್ ಕರ್ಕಡ ಅವರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದ್ದು, ದುರಂತದ ನಿಖರ ಕಾರಣ ಹಾಗೂ ಘಟನೆಯ ಸಂದರ್ಭಗಳ ಕುರಿತು ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ನಿರೀಕ್ಷಿಸಲಾಗಿದೆ.

ಮನೀಶ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯ ಯುವಕನನ್ನು ಕಳೆದುಕೊಂಡಿರುವ ಕಿನ್ನಿಗೋಳಿ ಭಾಗದಲ್ಲಿಯೂ ದುಃಖದ ವಾತಾವರಣ ನಿರ್ಮಾಣವಾಗಿದೆ.

ಮೃತರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಅಗಲಿದ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.

<nis:link nis:type=tag nis:id=mrpl nis:value=MRPL nis:enabled=true nis:link/> <nis:link nis:type=tag nis:id=mrplaccident nis:value=MRPLAccident nis:enabled=true nis:link/> <nis:link nis:type=tag nis:id=manishkarkada nis:value=ManishKarkada nis:enabled=true nis:link/> <nis:link nis:type=tag nis:id=ಮನೀಶ್_ಕರ್ಕಡ nis:value=ಮನೀಶ್_ಕರ್ಕಡ nis:enabled=true nis:link/> <nis:link nis:type=tag nis:id=ಕಿನ್ನಿಗೋಳಿ nis:value=ಕಿನ್ನಿಗೋಳಿ nis:enabled=true nis:link/> <nis:link nis:type=tag nis:id=ಮಂಗಳೂರು nis:value=ಮಂಗಳೂರು nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=omshanti nis:value=omshanti nis:enabled=true nis:link/>
ಮಾದರಿ ನೀತಿ ಸಂಹಿತೆ ಜಾರಿ: ಕೆಕೆಆರ್‌ಟಿಸಿ ಯಾದಗಿರಿ ವಿಭಾಗದ ಇ-ಟೆಂಡರ್‌ಗಳು ರದ್ದು
======================
ಯಾದಗಿರಿ, ಸೆಪ್ಟೆಂಬರ್.30 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗಕ್ಕೆ ಸಂಬAಧಿಸಿದAತೆ ಬಸ್ ನಿಲ್ದಾಣಗಳಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳಿಗೆ ಹಾಗೂ ಬಸ್ ನಿಲ್ದಾಣಗಳ ಸ್ವಚ್ಛತೆ ಪರವಾನಿಗೆಗೆ ಆಹ್ವಾನಿಸಿದ ಇ-ಟೆಂಡರ್ ಪ್ರಕಟಣೆ ದಿನಾಂಕ: 26-09-2026 ನ್ನು ವಿಧಾನ ಪರಿಷತ್ತಿನ ಪದವಿದರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಇರುವುದರಿಂದ ದಿನಾಂಕ: 29-09-2026 ರಿಂದ ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುವುದರಿಂದ ಸದರಿ ಟೆಂಡರ್ ಪ್ರಕಟಣೆಗಳನ್ನು ರದ್ದುಪಡಿಸಲಾಗಿರುತ್ತದೆ ಎಂದು ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರಪುರ ತಾಲ್ಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುವವರ ವಿರುದ್ಧ ಪ್ರಕರಣ ದಾಖಲು
=======================
ಯಾದಗಿರಿ, ಸೆಪ್ಟೆಂಬರ್. 30 ||  ಸುರಪುರ ತಾಲೂಕಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದವರ ವಿರುದ್ಧ ಆಹಾರ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.
ಸುರಪುರ ತಾಲೂಕಿನ ಕಕ್ಕೇರಿ ಕಡೆಯಿಂದ ಸುರಪುರ ಬೈಪಾಸ್ ಮುಖಾಂತರ ಕಲಬುರಗಿ ಕಡೆಗೆ ಐಷರ್ ಗೂಡ್ಸ್ ವಾಹನದಲ್ಲಿ (ಸಂಖ್ಯೆ: ಕೆಎ 32 ಎಎ 0563) ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಸುರಪುರ ಆಹಾರ ನಿರೀಕ್ಷಕರು ಹಾಗೂ ಪೆÇಲೀಸ್ ಇಲಾಖೆ ಸಿಬ್ಬಂದಿಗಳು ಜಂಟಿಯಾಗಿ ದಾಳಿ ನಡೆಸಿ ವಾಹನವನ್ನು ಪರಿಶೀಲಿಸಿದ್ದಾರೆ.
ದಾಳಿಯ ವೇಳೆ ವಾಹನದಲ್ಲಿದ್ದ 165.00 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಅಕ್ಕಿಯ ಅಂದಾಜು ಮೌಲ್ಯ ರೂ. 3,82,800 ಹಾಗೂ ಐಷರ್ ಗೂಡ್ಸ್ ವಾಹನದ ಅಂದಾಜು ಮೌಲ್ಯ ರೂ. 4,00,000 ಆಗಿದೆ.
ಈ ಸಂಬಂಧ ದಿನಾಂಕ 28/09/2026 ರಂದು ಸುರಪುರ ಪೆÇಲೀಸ್ ಠಾಣೆಯಲ್ಲಿ ವಾಹನ ಚಾಲಕನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಲಂ 3 ಮತ್ತು 7 ರಡಿ ಪ್ರಕರಣ (ಪ್ರಕರಣ ಸಂಖ್ಯೆ: 242/2026) ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಯಾದಗಿರಿಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
@topfans
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಯಾದಗಿರಿ.
ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ
===================
ಯಾದಗಿರಿ, ಸೆಪ್ಟೆಂಬರ್. 30 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್.1 ರಂದು ಶ್ರೀ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣ, ಸರ್ಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆಯ ಸಮಸ್ತ ಹಿರಿಯ ನಾಗರಿಕರು ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.
ಯಾದಗಿರಿಯಲ್ಲಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ
======================
ಯಾದಗಿರಿ, ಸೆಪ್ಟೆಂಬರ್. 30 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಯಾದಗಿರಿ ಇವುಗಳ ಸಹಯೋಗದಲ್ಲಿ ಯಾದಗಿರಿಯ ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕರಾದ ಮುಕುಂದರೆಡ್ಡಿ ಪಾಟೀಲ್, "ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಹಲವು ಯೋಜನೆಗಳು ಲಭ್ಯವಿದ್ದು, ಸಾರ್ವಜನಿಕರು ಸರಿಯಾದ ಆಯ್ಕೆಗಳನ್ನು ಮಾಡಿಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ನಿರ್ದಿಷ್ಟ ಗುರಿ ಹಾಗೂ ಉದ್ದೇಶದೊಂದಿಗೆ ಶ್ರಮಿಸಿದಾಗ ಮಾತ್ರ ಯಶಸ್ಸು ಸಾಧ್ಯ, ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಸೆಯ್ಯದ್ ಅಶ್ಫಾಕ್ ಅಹ್ಮದ್ ಮಾತನಾಡಿ, ಈ 10 ದಿನಗಳ ತರಬೇತಿಯಲ್ಲಿ ಉದ್ಯಮ ಸ್ಥಾಪಿಸುವ ವಿಧಾನ, ಸಾಲ ಸೌಲಭ್ಯಗಳು, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ, ಬ್ಯಾಂಕ್ ವ್ಯವಹಾರಗಳು ಹಾಗೂ ಸ್ವಯಂ ಉದ್ಯೋಗದ ಕುರಿತು ಸಂಪೂರ್ಣ ಮಾಹಿತಿ ಮತ್ತು ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಶ್ರೀಧರ ಮಾತನಾಡಿ, ಆರಂಭದಲ್ಲಿ ಸಣ್ಣ ಪ್ರಮಾಣದ ಉದ್ಯಮವನ್ನು ಆಯ್ಕೆ ಮಾಡಿಕೊಂಡು ಹಂತ-ಹಂತವಾಗಿ ಬೆಳೆಸಿದರೆ ಯಶಸ್ವಿ ಉದ್ಯಮಿಯಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿ ಶ್ರೀಮತಿ ಶಮಶದ ಖಾನಂ ಅವರು ಭಾಗವಹಿಸಿ ತಮ್ಮ ಉದ್ಯಮ ಪಯಣದ ಅನುಭವಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಂಡರು.
ಸಿಡಾಕ್ ಯಾದಗಿರಿಯ ತರಬೇತಿದಾರರಾದ ಮಲ್ಲಪ್ಪ ಟಿ. ಮೇತ್ರೆ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸುದೀರ್ಘ ಪೊಲೀಸ್ ಸೇವೆಗೆ ಗೌರವ: ಎಎಸ್‌ಐ ಪಿ. ಪುಟ್ಟಪ್ಪರಿಗೆ ಸನ್ಮಾನಿಸಿ ಬೀಳ್ಕೊಡುಗೆ

ಚಿತ್ರದುರ್ಗ, ಸೆ.30: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸೆಪ್ಟೆಂಬರ್ 30, 2026ರಂದು ವಯೋನಿವೃತ್ತಿ ಹೊಂದಿದ ಹೊಸದುರ್ಗ ಪೊಲೀಸ್ ಠಾಣೆಯ ಎಎಸ್‌ಐ ಶ್ರೀ ಪಿ. ಪುಟ್ಟಪ್ಪ ಅವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, ಐಪಿಎಸ್ ಅವರು ಪಿ. ಪುಟ್ಟಪ್ಪ ಅವರನ್ನು ಸನ್ಮಾನಿಸಿ, ಅವರ ಸುದೀರ್ಘ ಸೇವೆಯನ್ನು ಸ್ಮರಿಸಿದರು. ಬಳಿಕ ನಿವೃತ್ತ ಜೀವನ ಸುಖಕರವಾಗಿರಲಿ, ಮುಂದಿನ ದಿನಗಳು ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿದ ಪಿ. ಪುಟ್ಟಪ್ಪ ಅವರ ಅಮೂಲ್ಯ ಸೇವೆಯನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಲಾಯಿತು. ಅವರ ಸೇವೆಗೆ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಲಾಯಿತು.

ನಿವೃತ್ತಿಯ ನಂತರದ ಜೀವನದಲ್ಲಿಯೂ ಉತ್ತಮ ಆರೋಗ್ಯ ಹಾಗೂ ನೆಮ್ಮದಿಯಿಂದ ಕಾಲ ಕಳೆಯುವಂತಾಗಲಿ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಭ ಹಾರೈಸಿದರು.

<nis:link nis:type=tag nis:id=ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ nis:value=ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ nis:enabled=true nis:link/> <nis:link nis:type=tag nis:id=ಚಿತ್ರದುರ್ಗ_ಜಿಲ್ಲಾ_ಪೊಲೀಸ್ nis:value=ಚಿತ್ರದುರ್ಗ_ಜಿಲ್ಲಾ_ಪೊಲೀಸ್ nis:enabled=true nis:link/> <nis:link nis:type=tag nis:id=ವಯೋನಿವೃತ್ತಿ nis:value=ವಯೋನಿವೃತ್ತಿ nis:enabled=true nis:link/> <nis:link nis:type=tag nis:id=ಪೊಲೀಸ್_ಇಲಾಖೆ nis:value=ಪೊಲೀಸ್_ಇಲಾಖೆ nis:enabled=true nis:link/> <nis:link nis:type=tag nis:id=ಪಿ_ಪುಟ್ಟಪ್ಪ nis:value=ಪಿ_ಪುಟ್ಟಪ್ಪ nis:enabled=true nis:link/> <nis:link nis:type=tag nis:id=karnatakastatepolice nis:value=KarnatakaStatePolice nis:enabled=true nis:link/> <nis:link nis:type=tag nis:id=chitradurgapolice nis:value=ChitradurgaPolice nis:enabled=true nis:link/>
Video 11
I got over 20,000 reactions on one of my posts last week! Thanks everyone for your support! 🎉
45 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿ ಮದುವೆ; ನಾಲ್ಕೇ ತಿಂಗಳಲ್ಲಿ ಟೆಕ್ಕಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳದ ಆರೋಪ

ಪುಣೆ: ಅದ್ಧೂರಿಯಾಗಿ ವಿವಾಹವಾದ ಕೇವಲ ನಾಲ್ಕು ತಿಂಗಳಲ್ಲೇ 24 ವರ್ಷದ ಎಂಜಿನಿಯರಿಂಗ್‌ ವೃತ್ತಿಯಲ್ಲಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ. ಯುವತಿಯ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಪೊಲೀಸರು ಪತಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವೈಷ್ಣವಿ ಓಂಕಾರ್ ಗಿಸ್ರೆ (24) ಎಂದು ಗುರುತಿಸಲಾಗಿದೆ. ವೈಷ್ಣವಿ ಅವರು ಮೇ 9ರಂದು ಓಂಕಾರ್ ಸಂಜಯ್ ಗಿಸ್ರೆ (28) ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಅವರು ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.

ಕುಟುಂಬಸ್ಥರ ದೂರಿನ ಪ್ರಕಾರ, ವೈಷ್ಣವಿ ಅವರ ವಿವಾಹವನ್ನು ಪೋಷಕರು ಅದ್ಧೂರಿಯಾಗಿ ನೆರವೇರಿಸಿದ್ದರು. ಮದುವೆಗಾಗಿ ಸುಮಾರು 45 ಲಕ್ಷ ರೂ. ಹಣವನ್ನು ಖರ್ಚು ಮಾಡಲಾಗಿತ್ತು. ಅಲ್ಲದೆ, ಸುಮಾರು 116.64 ಗ್ರಾಂ ಚಿನ್ನವನ್ನು ಅಳಿಯನಿಗೆ ಉಡುಗೊರೆಯಾಗಿ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಮದುವೆಯ ಬಳಿಕವೂ ಹೆಚ್ಚುವರಿ ಹಣಕ್ಕಾಗಿ ಒತ್ತಾಯಿಸಲಾಗುತ್ತಿತ್ತು ಎಂಬುದು ಕುಟುಂಬದ ಆರೋಪವಾಗಿದೆ. ವಿಶೇಷವಾಗಿ ಕಾರು ಖರೀದಿಸಲು ಇನ್ನೂ 5 ಲಕ್ಷ ರೂ. ಹಣವನ್ನು ತರುವಂತೆ ವೈಷ್ಣವಿಗೆ ಪತಿ ಹಾಗೂ ಅತ್ತೆ-ಮಾವ ಒತ್ತಾಯಿಸುತ್ತಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಹಣದ ಬೇಡಿಕೆಯನ್ನು ಈಡೇರಿಸುವಂತೆ ಪದೇ ಪದೇ ಒತ್ತಡ ಹೇರಲಾಗುತ್ತಿತ್ತು. ಇದರೊಂದಿಗೆ ವೈಷ್ಣವಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆಕೆಯ ಕುಟುಂಬ ಆರೋಪಿಸಿದೆ. ನಿರಂತರ ಕಿರುಕುಳದಿಂದಾಗಿ ವೈಷ್ಣವಿ ತೀವ್ರವಾಗಿ ನೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪುಣೆಯ ಪುರಂದರ ತಾಲೂಕಿನ ನಿವಾಸಿಯಾಗಿರುವ ವೈಷ್ಣವಿ ಅವರ ತಂದೆ ಪ್ರವೀಣ್ ರಘುನಾಥ್ ಜರಂಡೆ (51) ಅವರು ಮಗಳ ಆತ್ಮಹತ್ಯೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆ ಸಂದರ್ಭದಲ್ಲಿ ತಾವು ಮಾಡಿದ್ದ ಖರ್ಚು ಹಾಗೂ ನೀಡಿದ್ದ ಚಿನ್ನದ ವಿವರಗಳನ್ನು ಅವರು ದೂರಿನಲ್ಲಿ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ವೈಷ್ಣವಿ ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಮಾಹಿತಿ ಲಭಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೈಷ್ಣವಿ ಅವರ ಪತಿ ಓಂಕಾರ್ ಸಂಜಯ್ ಗಿಸ್ರೆ, ಮಾವ ಸಂಜಯ್ ಮಹಾದೇವ್ ಗಿಸ್ರೆ (49) ಹಾಗೂ ಅತ್ತೆ ರೂಪಾಲಿ ಸಂಜಯ್ ಗಿಸ್ರೆ (42) ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವರದಕ್ಷಿಣೆಗಾಗಿ ಹಣದ ಬೇಡಿಕೆ ಇಟ್ಟಿದ್ದಾರೆಯೇ, ಕಿರುಕುಳ ನೀಡಲಾಗಿತ್ತೇ ಹಾಗೂ ಆತ್ಮಹತ್ಯೆಗೆ ಯಾವುದೇ ನೇರ ಕಾರಣಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಯುವತಿಯ ಕುಟುಂಬ ಮಾಡಿರುವ ಆರೋಪಗಳು ತನಿಖೆಯ ಹಂತದಲ್ಲಿದ್ದು, ಪೊಲೀಸರು ಸಂಗ್ರಹಿಸುವ ಸಾಕ್ಷ್ಯಗಳು ಮತ್ತು ತನಿಖೆಯ ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ಪ್ರಕರಣದ ವಾಸ್ತವಾಂಶ ಸ್ಪಷ್ಟವಾಗಬೇಕಿದೆ.
Video 14
ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ಗಳನ್ನು CEIR PORTAL ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸಲಾಯಿತು. <nis:link nis:type=tag nis:id=igpsrmysuru nis:value=igpsrmysuru nis:enabled=true nis:link/> <nis:link nis:type=tag nis:id=dgpkarnataka nis:value=dgpkarnataka nis:enabled=true nis:link/> <nis:link nis:type=tag nis:id=karnatakacops nis:value=karnatakacops nis:enabled=true nis:link/>
ಗೌಡಗೇರಾ–ಗೌಡಗೇರಾ ತಾಂಡಾದಲ್ಲಿ ಹಲವು ತಿಂಗಳಿಂದ ಪಡಿತರ ವಿತರಣೆ ಇಲ್ಲ

21 ಫಲಾನುಭವಿಗಳ ದೂರು; ದಾಖಲೆ ಪರಿಶೀಲಿಸಿ ತನಿಖೆ ನಡೆಸಿ, ಬಾಕಿ ಪಡಿತರ ಕೂಡಲೇ ವಿತರಿಸಲು ರಮೇಶ್ ಜೆ. ಚವ್ಹಾಣ್ ಆಗ್ರಹ

ಯಾದಗಿರಿ: ತಾಲೂಕಿನ ಕಿಲ್ಲನಕೇರಾ ಗ್ರಾಮದ ವ್ಯಾಪ್ತಿಯ ಗೌಡಗೇರಾ ಹಾಗೂ ಗೌಡಗೇರಾ ತಾಂಡಾದ ಹಲವು ಪಡಿತರ ಚೀಟಿದಾರರಿಗೆ ಕಳೆದ 1ರಿಂದ 4 ತಿಂಗಳವರೆಗೆ ಪಡಿತರ ದೊರೆತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಪಡಿತರ ವಿತರಕರನ್ನು ವಿಚಾರಿಸಿದಾಗ, “ಮೇಲಿನಿಂದ ಪಡಿತರ ಬಂದಿದೆ, ಆದರೆ ಪ್ರಸ್ತುತ ನಮ್ಮ ಬಳಿ ಸ್ಟಾಕ್ ಇಲ್ಲ” ಎಂದು ತಿಳಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು 21 ಫಲಾನುಭವಿಗಳು ಪಡಿತರ ಸಿಗದಿರುವ ಬಗ್ಗೆ ದೂರು ನೀಡಿದ್ದು, ಇನ್ನೂ ಹಲವರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಸರ್ಕಾರದಿಂದ ಪಡಿತರ ಅಂಗಡಿಗೆ ಮಂಜೂರಾದ ಅಕ್ಕಿ, ಜೋಳ, ಗೋಧಿ ಸೇರಿದಂತೆ ಆಹಾರ ಧಾನ್ಯಗಳ ಪ್ರಮಾಣ ಎಷ್ಟು, ಫಲಾನುಭವಿಗಳಿಗೆ ಎಷ್ಟು ವಿತರಿಸಲಾಗಿದೆ ಹಾಗೂ ಪ್ರಸ್ತುತ ಸ್ಟಾಕ್ ಎಷ್ಟು ಇದೆ ಎಂಬುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ 2028ರ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ರಮೇಶ್ ಜೆ. ಚವ್ಹಾಣ್ ಆಗ್ರಹಿಸಿದ್ದಾರೆ.

ಅಧಿಕಾರಿಗಳು ಸ್ಟಾಕ್ ರಿಜಿಸ್ಟರ್, ವಿತರಣಾ ದಾಖಲೆಗಳು, ಪಡಿತರ ಚೀಟಿ ಹಾಗೂ ಬಯೋಮೆಟ್ರಿಕ್ ದಾಖಲೆಗಳನ್ನು ಪರಿಶೀಲಿಸಿ, ಪಡಿತರ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ಅಕ್ರಮ ನಡೆದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ತಪ್ಪು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಪಡಿತರ ಸಿಗದೆ ಬಾಕಿ ಉಳಿದಿರುವ ಎಲ್ಲಾ ತಿಂಗಳ ಧಾನ್ಯವನ್ನು ಅರ್ಹ ಫಲಾನುಭವಿಗಳಿಗೆ ಕೂಡಲೇ ವಿತರಿಸಬೇಕು. ಬಡವರ ಹಕ್ಕಿನ ಪಡಿತರ ಅವರಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ರಮೇಶ್ ಜೆ. ಚವ್ಹಾಣ್ ತಿಳಿಸಿದ್ದಾರೆ.
ಗಣೇಶ ವಿಸರ್ಜನೆ: ಅಹಿತಕರ ಘಟನೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್

ಮದ್ದೂರು: ಮದ್ದೂರು ನಗರದಲ್ಲಿ ಸೆಪ್ಟೆಂಬರ್ 28, 2026ರಂದು ಸನಾತನ ಬಾಯ್ಸ್ & ಸರ್ವಸಿದ್ಧಾಂತ ಯುವಕರ ಬಳಗದ ವತಿಯಿಂದ ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಐಪಿಎಸ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿವಿಧ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಗಣೇಶ ಮೆರವಣಿಗೆ ಸಾಗುವ ಮಾರ್ಗಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳು ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದರು.

ಗಣೇಶ ವಿಸರ್ಜನಾ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಸಂಚಾರ ವ್ಯವಸ್ಥೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಿದರು.

ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಪೊಲೀಸ್ ಇಲಾಖೆಯ ಬಂದೋಬಸ್ತ್ ವ್ಯವಸ್ಥೆ ನೆರವಾಯಿತು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ UNICEF ತಂಡದೊಂದಿಗೆ ಮಹತ್ವದ ಸಭೆ

ಯಾದಗಿರಿ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ, ಭಾ.ಆ.ಸೇ. ಅವರ ಅಧ್ಯಕ್ಷತೆಯಲ್ಲಿ UNICEF ಹೈದರಾಬಾದ್ ತಂಡದೊಂದಿಗೆ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಸ್ವಚ್ಛತೆ, ಕುಡಿಯುವ ನೀರು ಹಾಗೂ WASH (Water, Sanitation and Hygiene) ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಶ್ರೀ ಕೆ. ಕುಮಲಯ್ಯ, UNICEF ತಂಡದ Dr. Prabhat Matpady, WASH & CCES Expert ಹಾಗೂ NL Narasimha Reddy, E&K Management Expert ಸೇರಿದಂತೆ DDPI, DHO, WCD, DIET ಪ್ರಾಂಶುಪಾಲರು ಹಾಗೂ SBM ತಂಡದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ Swachh Bharat Mission (SBM) ಮತ್ತು Jal Jeevan Mission (JJM) ಯೋಜನೆಗಳ ಅನುಷ್ಠಾನ, ಸ್ವಚ್ಛತೆ, ಕುಡಿಯುವ ನೀರಿನ ಲಭ್ಯತೆ ಹಾಗೂ ಸಂಬಂಧಿತ ಕಾರ್ಯಕ್ರಮಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಲಾಖೆಗಳ ನಡುವೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

<nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=yadgir nis:value=Yadgir nis:enabled=true nis:link/> <nis:link nis:type=tag nis:id=unicef nis:value=UNICEF nis:enabled=true nis:link/> <nis:link nis:type=tag nis:id=wash nis:value=WASH nis:enabled=true nis:link/> <nis:link nis:type=tag nis:id=unicefteamhyderabad nis:value=UnicefTeamHyderabad nis:enabled=true nis:link/> <nis:link nis:type=tag nis:id=sbm nis:value=SBM nis:enabled=true nis:link/> <nis:link nis:type=tag nis:id=sbmg nis:value=SBMG nis:enabled=true nis:link/> <nis:link nis:type=tag nis:id=jjm nis:value=JJM nis:enabled=true nis:link/> <nis:link nis:type=tag nis:id=jaljeevanmission nis:value=JalJeevanMission nis:enabled=true nis:link/> <nis:link nis:type=tag nis:id=swachhbharatmission nis:value=SwachhBharatMission nis:enabled=true nis:link/> <nis:link nis:type=tag nis:id=districtadministrationyadgir nis:value=DistrictAdministrationYadgir nis:enabled=true nis:link/> <nis:link nis:type=tag nis:id=ruraldevelopment nis:value=RuralDevelopment nis:enabled=true nis:link/> <nis:link nis:type=tag nis:id=panchayatrajkarnataka nis:value=PanchayatRajKarnataka nis:enabled=true nis:link/>
ಮುಖ್ಯಮಂತ್ರಿ ಪ್ರವಾಸ ಹಿನ್ನೆಲೆ ವಿಜಯವಾಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮಾಕಿನೇನಿ ಬಸವಪುಣ್ಣಯ್ಯ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ನಗರ ಪೊಲೀಸ್ ಆಯುಕ್ತ ಎಸ್.ವಿ. ರಾಜಶೇಖರ ಬಾಬು

ವಿಜಯವಾಡ: ಇದೇ ತಿಂಗಳ 30ರಂದು ಗೌರವಾನ್ವಿತ ಮುಖ್ಯಮಂತ್ರಿ ಅವರು ಮನೆ ನಿವೇಶನ ಪಟ್ಟಿಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಜಯವಾಡದ ಅಜಿತ್ ಸಿಂಗ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಕಿನೇನಿ ಬಸವಪುಣ್ಣಯ್ಯ ಕ್ರೀಡಾಂಗಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಪ್ರವಾಸದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಶ್ರೀ ಎಸ್.ವಿ. ರಾಜಶೇಖರ ಬಾಬು, ಐಪಿಎಸ್ ಅವರು ಇಂದು ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕ್ರೀಡಾಂಗಣ, ಸುತ್ತಮುತ್ತಲಿನ ಪ್ರದೇಶಗಳು, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿದರು.

ಈ ವೇಳೆ ಬಂದೋಬಸ್ತ್ ವ್ಯವಸ್ಥೆಯ ಕುರಿತು ಸಂಬಂಧಿತ ಅಧಿಕಾರಿಗಳು ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಹಲವು ಅಗತ್ಯ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರ ಸುರಕ್ಷತೆ, ಸಂಚಾರ ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಸ್.ವಿ. ರಾಜಶೇಖರ ಬಾಬು ಅವರು, ಮುಖ್ಯಮಂತ್ರಿ ಅವರ ಪ್ರವಾಸದ ಹಿನ್ನೆಲೆಯಲ್ಲಿ ಮಾಕಿನೇನಿ ಬಸವಪುಣ್ಣಯ್ಯ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಎಐ ಆಧಾರಿತ ನಿಗಾ ವ್ಯವಸ್ಥೆ ಬಳಸಿಕೊಂಡು ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಅವರ ಕಾರ್ಯಕ್ರಮದ ಭದ್ರತೆಗಾಗಿ 3 ಎಸ್‌ಪಿಗಳು, 1 ಎಡಿಸಿಪಿ, 17 ಎಸಿಪಿಗಳು ಹಾಗೂ 37 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 1,076 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಕ್ರೀಡಾಂಗಣದ ಒಳಭಾಗ ಹಾಗೂ ಹೊರಭಾಗದಲ್ಲಿ ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ಸಂಚಾರ ನಿರ್ವಹಣೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ.

ಈ ಸಂದರ್ಭದಲ್ಲಿ ಡಿಸಿಪಿ ಶ್ರೀ ಜಿ. ರಾಮಕೃಷ್ಣ, ಎಸಿಪಿಗಳು, ಇತರೆ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಕಾರ್ಯಕ್ರಮದ ಆಯೋಜಕರು ಉಪಸ್ಥಿತರಿದ್ದರು.

<nis:link nis:type=tag nis:id=ntrpolice nis:value=NTRPolice nis:enabled=true nis:link/> <nis:link nis:type=tag nis:id=vijayawadapolice nis:value=VijayawadaPolice nis:enabled=true nis:link/> <nis:link nis:type=tag nis:id=ntrpolicecommissionerate nis:value=NTRPoliceCommissionerate nis:enabled=true nis:link/> <nis:link nis:type=tag nis:id=vijayawada nis:value=Vijayawada nis:enabled=true nis:link/> <nis:link nis:type=tag nis:id=cmvisit nis:value=CMVisit nis:enabled=true nis:link/> <nis:link nis:type=tag nis:id=securityarrangements nis:value=SecurityArrangements nis:enabled=true nis:link/> <nis:link nis:type=tag nis:id=policebandobast nis:value=PoliceBandobast nis:enabled=true nis:link/> <nis:link nis:type=tag nis:id=publicsafety nis:value=PublicSafety nis:enabled=true nis:link/> <nis:link nis:type=tag nis:id=security nis:value=Security nis:enabled=true nis:link/> <nis:link nis:type=tag nis:id=aisurveillance nis:value=AISurveillance nis:enabled=true nis:link/> <nis:link nis:type=tag nis:id=cctv nis:value=CCTV nis:enabled=true nis:link/> <nis:link nis:type=tag nis:id=makinenenibasavapunnaiahstadium nis:value=MakineneniBasavapunnaiahStadium nis:enabled=true nis:link/> <nis:link nis:type=tag nis:id=ajitsinghnagar nis:value=AjitSinghNagar nis:enabled=true nis:link/> <nis:link nis:type=tag nis:id=appolice nis:value=APPolice nis:enabled=true nis:link/> <nis:link nis:type=tag nis:id=andhrapradeshpolice nis:value=AndhraPradeshPolice nis:enabled=true nis:link/> <nis:link nis:type=tag nis:id=safevijayawada nis:value=SafeVijayawada nis:enabled=true nis:link/>
🔴 ಮಧ್ಯರಾತ್ರಿ ATM ದೋಚಲು ಬಂದ ಕಳ್ಳರು; ಮಹಿಳಾ ಮ್ಯಾನೇಜರ್‌ ಸಮಯಪ್ರಜ್ಞೆಯಿಂದ ಬೂತ್‌ನೊಳಗೇ ಲಾಕ್!

ಜೈಪುರ: ಮಧ್ಯರಾತ್ರಿ ಎಟಿಎಂ ಯಂತ್ರ ಒಡೆದು ಲಕ್ಷಾಂತರ ರೂಪಾಯಿ ಹಣ ದೋಚಲು ಬಂದಿದ್ದ ಇಬ್ಬರು ಕಳ್ಳರನ್ನು ಮಹಿಳಾ ಬ್ಯಾಂಕ್ ಮ್ಯಾನೇಜರ್‌ ತಮ್ಮ ಸಮಯಪ್ರಜ್ಞೆಯಿಂದ ಎಟಿಎಂ ಬೂತ್‌ನೊಳಗೇ ಬಂಧಿಸಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

ಮಹಿಳಾ ಮ್ಯಾನೇಜರ್‌ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಎಟಿಎಂನಲ್ಲಿದ್ದ ₹16.09 ಲಕ್ಷಕ್ಕೂ ಅಧಿಕ ನಗದು ಹಣ ಸುರಕ್ಷಿತವಾಗಿದ್ದು, ದರೋಡೆಗೆ ಬಂದಿದ್ದ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಘಟನೆ ಸೋಮವಾರ ತಡರಾತ್ರಿ ಸುಮಾರು 2.13 ಗಂಟೆಗೆ ನಾಗೌರ್ ಜಿಲ್ಲೆಯ ಯುಸಿಒ (UCO) ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಮುಂಡ್ವಾ ನಿವಾಸಿ ಭರತ್ ಪ್ರಜಾಪತ್ ಹಾಗೂ ಬಿಹಾರ ಮೂಲದ ಕೋಮಲ್ ಕುಮಾರ್ ಎಂಬವರು ಬೈಕ್‌ನಲ್ಲಿ ಆಗಮಿಸಿ ಎಟಿಎಂ ದೋಚಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

🚨 ಅಲಾರಂ ಮೊಳಗುತ್ತಿದ್ದಂತೆ ಎಚ್ಚೆತ್ತ ಬ್ಯಾಂಕ್

ಆರೋಪಿಗಳು ಎಟಿಎಂ ಬೂತ್ ಪ್ರವೇಶಿಸಿದ ಬಳಿಕ ಸಿಸಿಟಿವಿ ಕ್ಯಾಮೆರಾಗೆ ಗ್ರೀಸ್ ಸವರಿ ದೃಶ್ಯ ಸೆರೆಯಾಗದಂತೆ ಮಾಡಲು ಯತ್ನಿಸಿದ್ದಾರೆ. ಬಳಿಕ ಕೆಲವು ವೈರ್‌ಗಳನ್ನು ತುಂಡರಿಸಿ ಎಟಿಎಂ ಯಂತ್ರವನ್ನು ಒಡೆಯಲು ಮುಂದಾಗಿದ್ದಾರೆ.

ಈ ವೇಳೆ ಬ್ಯಾಂಕಿನ ಇ-ಸರ್ವೆಲೆನ್ಸ್ ವ್ಯವಸ್ಥೆ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಿ ಅಲಾರಂ ನೀಡಿದೆ. ತಕ್ಷಣ ಅಜ್ಮೇರ್ ವಲಯದ ಭದ್ರತಾ ಅಧಿಕಾರಿ ಗೌತಮ್ ಅವರು ಬ್ಯಾಂಕ್ ಮ್ಯಾನೇಜರ್ ಸರಿತಾ ಚೌಧರಿ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

🔒 ಕಳ್ಳರನ್ನೇ ಬೂತ್‌ನೊಳಗೆ ಲಾಕ್ ಮಾಡಿದ ಮ್ಯಾನೇಜರ್!

ಬ್ಯಾಂಕ್‌ನ ಮೇಲ್ಭಾಗದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಸರಿತಾ ಚೌಧರಿ ಅವರು ತಡಮಾಡದೆ ಪತಿಯೊಂದಿಗೆ ಕೆಳಗೆ ಧಾವಿಸಿದ್ದಾರೆ. ಎಟಿಎಂ ಬೂತ್‌ನೊಳಗೆ ಇಬ್ಬರು ವ್ಯಕ್ತಿಗಳು ಯಂತ್ರ ಒಡೆಯುತ್ತಿರುವುದನ್ನು ಗಮನಿಸಿದ ಅವರು, ಅಪಾಯವನ್ನು ಲೆಕ್ಕಿಸದೆ ಹೊರಗಿನಿಂದಲೇ ಶಟರ್ ಎಳೆದು ಬೂತ್‌ನ್ನು ಲಾಕ್ ಮಾಡಿದ್ದಾರೆ.

ಇದರಿಂದ ಎಟಿಎಂ ದೋಚಲು ಬಂದಿದ್ದ ಇಬ್ಬರೂ ಆರೋಪಿಗಳು ಬೂತ್‌ನೊಳಗೇ ಸಿಲುಕಿಕೊಂಡಿದ್ದಾರೆ.

ನಂತರ ಸರಿತಾ ಚೌಧರಿ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶಟರ್ ತೆರೆದು ಒಳಗಿದ್ದ ಇಬ್ಬರು ಆರೋಪಿಗಳನ್ನು ದರೋಡೆಗೆ ಬಳಸಿದ್ದ ಪರಿಕರಗಳ ಸಮೇತ ಬಂಧಿಸಿದ್ದಾರೆ.

💰 ₹16,00,900 ಹಣ ಸುರಕ್ಷಿತ

ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಎಟಿಎಂನಲ್ಲಿ ₹16,00,900 ನಗದು ಇರಿಸಲಾಗಿತ್ತು ಎನ್ನಲಾಗಿದೆ. ಕಳ್ಳರು ಹಣ ದೋಚುವ ಮುನ್ನವೇ ಸಿಕ್ಕಿಬಿದ್ದಿರುವುದರಿಂದ ಸಂಪೂರ್ಣ ಹಣ ಸುರಕ್ಷಿತವಾಗಿದೆ.

ಘಟನೆಯಲ್ಲಿ ಮ್ಯಾನೇಜರ್ ಸರಿತಾ ಚೌಧರಿ ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅವರ ತ್ವರಿತ ನಿರ್ಧಾರದಿಂದ ಎಟಿಎಂ ದರೋಡೆ ಯತ್ನ ವಿಫಲವಾಗಿದ್ದು, ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

<nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=atmrobbery nis:value=ATMRobbery nis:enabled=true nis:link/> <nis:link nis:type=tag nis:id=ucobank nis:value=UCOBank nis:enabled=true nis:link/> <nis:link nis:type=tag nis:id=nagaur nis:value=Nagaur nis:enabled=true nis:link/> <nis:link nis:type=tag nis:id=rajasthan nis:value=Rajasthan nis:enabled=true nis:link/> <nis:link nis:type=tag nis:id=bankmanager nis:value=BankManager nis:enabled=true nis:link/> <nis:link nis:type=tag nis:id=crimenews nis:value=CrimeNews nis:enabled=true nis:link/> <nis:link nis:type=tag nis:id=robberyattempt nis:value=RobberyAttempt nis:enabled=true nis:link/> <nis:link nis:type=tag nis:id=police nis:value=Police nis:enabled=true nis:link/> <nis:link nis:type=tag nis:id=jaipurnews nis:value=JaipurNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/>
BREAKING NEWS || ಯಾದಗಿರಿ ಬ್ರೇಕಿಂಗ್ | ಟೈರ್ ಸ್ಫೋಟ… ಮರಕ್ಕೆ ಅಪ್ಪಳಿಸಿದ ಕಾರು! ಬಾಲಕಿ ಸೇರಿ ಮೂವರ ದಾರುಣ ಸಾವು
ಓಯೋ ಹೋಟೆಲ್‌ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಆರೋಪದ ಮೇಲೆ ಗೆಳೆಯ ಬಂಧನ

ಹೈದರಾಬಾದ್: ಓಯೋ ಹೋಟೆಲ್‌ನಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.

ಮೃತ ಯುವತಿಯನ್ನು ಶರೋನ್ ನಿಖಿತಾ ಟೋಪ್ನೊ (29) ಎಂದು ಗುರುತಿಸಲಾಗಿದ್ದು, ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜನನ್ನು ಕೊಲೆ ಆರೋಪದ ಮೇಲೆ ಮಾಧಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 21ರಂದು ನಿಖಿತಾ ಮತ್ತು ರವಿತೇಜ ಮಾಧಾಪುರದ ಸಿದ್ದಿಕಿ ನಗರದ ರಸ್ತೆ ಸಂಖ್ಯೆ 5ರಲ್ಲಿರುವ ಹೋಟೆಲ್‌ನ ಕೊಠಡಿ ಸಂಖ್ಯೆ 304ರಲ್ಲಿ ತಂಗಿದ್ದರು. ಅದೇ ರಾತ್ರಿ ನಿಖಿತಾ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ ನಿಖಿತಾ ಪ್ರಜ್ಞಾಹೀನಳಾಗಿದ್ದಾಳೆ ಎಂದು ರವಿತೇಜ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾನೆ. ಸಿಬ್ಬಂದಿಯ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬಳಿಕ ರವಿತೇಜ ಆಸ್ಪತ್ರೆಯಿಂದ ತೆರಳಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಖಿತಾ ಅವರ ಮುಖ ಮತ್ತು ತಲೆಯ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಹೋಟೆಲ್ ಕೊಠಡಿಯ ಗೋಡೆ ಹಾಗೂ ಬೆಡ್‌ಶೀಟ್‌ಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ರವಿತೇಜನ ಮೇಲೆ ಅನುಮಾನ ಬಲಗೊಂಡಿದ್ದು, ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ನಡುವೆ ಆತ ಆತ್ಮಹತ್ಯೆಗೆ ಯತ್ನಿಸಿ ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನಿಖಿತಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ತಂಟೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ — 4 ಮಂದಿ ಬಂಧನ

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉಂಟಾದ ಕ್ಷುಲ್ಲಕ ವಿಚಾರದ ಜಗಳ ಮುಂದುವರಿದು, ಇಬ್ಬರ ಮೇಲೆ ಕಲ್ಲು ಹಾಗೂ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ನಾಲ್ವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆ.27ರಂದು ರಾತ್ರಿ ಸುಮಾರು 11 ಗಂಟೆ ವೇಳೆಗೆ ಬೆಳಗಾವಿ ನಗರದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಖಡಕಗಲ್ಲಿ ಗಣಪತಿ ಮಂಡಳಿ ಹಾಗೂ ತೆಂಗಿನಕೇರಿ ಗಣೇಶ ಮಂಡಳಿ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ತಂಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಎ1 ಆರೋಪಿ ರೋಹಿತ್ ಶಿಂಧೆ ಎಂಬಾತನಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದು ಫಿರ್ಯಾದಿದಾರ ಆದಿತ್ಯ ರಾಜು ಅಳನಾನಿ (22) ಹಾಗೂ ಇತರರು ಬೆಂಡಿ ಬಜಾರ್ ಸರ್ಕಲ್–ತೆಂಗಿನಕೇರಿ ಗಲ್ಲಿ ಕಾರ್ನರ್ ಬಳಿ ತೆರಳಿ, ರೋಹಿತ್ ಶಿಂಧೆಗೆ ಏಕೆ ಬೈಯುತ್ತಿದ್ದೀರಿ ಎಂದು ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿತರು ಗುಂಪಾಗಿ ಸೇರಿಕೊಂಡು ಅವರನ್ನು ಅಡ್ಡಗಟ್ಟಿ, ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಹಾಗೂ ಕಟ್ಟಿಗೆಯಿಂದ ಆದಿತ್ಯ ರಾಜು ಅಳನಾನಿ ಹಾಗೂ ಓಂಕಾರ ಮಹೇಂದ್ರ ಶಿಂಧೆ ಅವರ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಆದಿತ್ಯ ರಾಜು ಅಳನಾನಿ ಅವರು ಸೆ.28ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 210/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಆಯುಕ್ತರಾದ ಸಂತೋಷ ಡಿ. ಸತ್ಯನಾಯಿಕ, ಮಾರ್ಕೆಟ್ ಉಪವಿಭಾಗ, ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ, ಮಾರ್ಕೆಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಹಾಗೂ ಪಿಎಸ್ಐ ಮಣಿಕಂಠ ಪೂಜಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ:

1. ರಾಜು ಶೆಡಗೆ (25) – ತೆಂಗಿನಕೇರಿ ಗಲ್ಲಿ, ಬೆಳಗಾವಿ

2. ವಿಶಾಲ ತುಕಾರಾಮ ತಹಶೀಲ್ದಾರ (41) – ತೆಂಗಿನಕೇರಿ ಗಲ್ಲಿ, ಬೆಳಗಾವಿ

3. ಸತೀಶ ನಂದು ಘಸಾರಿ (46) – ತೆಂಗಿನಕೇರಿ ಗಲ್ಲಿ, ಬೆಳಗಾವಿ

4. ವಿನಿತ ವಿನಾಯಕ ಮಡಮಂಜಿ (18) – ಮಾಳಿಗಲ್ಲಿ, ಬೆಳಗಾವಿ

ಇವರನ್ನು ಸೆ.28ರಂದು ಬಂಧಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಪ್ರಕರಣದಲ್ಲಿ ಇನ್ನೂ ಹಲವು ಆರೋಪಿತರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.

ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

<nis:link nis:type=tag nis:id=belagavi nis:value=Belagavi nis:enabled=true nis:link/> <nis:link nis:type=tag nis:id=belagavipolice nis:value=BelagaviPolice nis:enabled=true nis:link/> <nis:link nis:type=tag nis:id=marketpolice nis:value=MarketPolice nis:enabled=true nis:link/> <nis:link nis:type=tag nis:id=crimenews nis:value=CrimeNews nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/>
ಯಾದಗಿರಿ || ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ? ನಿಮ್ಮ ಕೆಲಸವನ್ನೂ ನಾವು ಹೇಳಬೇಕೇ?
“ಇದು ನಿಮ್ಮ ಕೆಲಸ” ಎಂದು ಅಧಿಕಾರಿಗಳಿಗೆ ನೆನಪಿಸಬೇಕಾದ ಪರಿಸ್ಥಿತಿ ಯಾದಗಿರಿಯಲ್ಲಿ