ರಾಮನಗರ: ಬಿಡದಿಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ವಂಚನೆ: 12 ಮಂದಿ ಬಂಧನ
ಬಿಡದಿಯ ಜಿಬಿಡಿಎ ಕಚೇರಿಯಲ್ಲಿ ಜಮೀನಿನ ಪರಿಹಾರಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿದ 12 ಮಂದಿಯನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತರುಣ್ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳಿದ್ದು, ಈ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಹೇರಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಎಸ್.ಪಿ ತಿಳಿಸಿದ್ದಾರೆ.