ರಾಮನಗರ: ಬಿಡದಿ: ಮಳೆ ಬಂದರೆ ಸಾಕು A1 ಸ್ಕೂಲ್ ಎದುರು ನಿಲ್ಲುತ್ತೆ ಕಾಲುದ್ದ ನೀರು, ಸ್ಥಳೀಯರ ಪರದಾಟ!
ಬಿಡದಿಯ ಹೌಸಿಂಗ್ ಬೋರ್ಡ್ ಕಾರ್ನರ್ನಲ್ಲಿರುವ A1 ಸ್ಕೂಲ್ ಎದುರುಗಡೆ ಮಳೆ ಬಂದರೆ ರಸ್ತೆಯಲ್ಲೆಲ್ಲ ನೀರು ನಿಲ್ಲುತ್ತಿದ್ದು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಓಡಾಟಕ್ಕೆ ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ವಿನಂತಿ ಮಾಡಿದ್ದಾರೆ.