Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
No video available

ನಂಜನಗೂಡು: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ; ರಂಜಾನ್ ಆಚರಣೆಯಲ್ಲಿ ಭಾಗಿಯಾದ ಶಾಸಕ ದರ್ಶನ್ ಧ್ರುವನಾರಾಯಣ್

Nanjangud, Mysuru | Apr 11, 2024
ನಂಜನಗೂಡು: ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು ಇಂದು ಗುರುವಾರ ಸಡಗರ ಸಂಭ್ರಮದಿಂದ ರಂಜಾನ್‌ ಹಬ್ಬವನ್ನು ಆಚರಣೆ ಮಾಡಲಾಯಿತು. ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ರಂಜಾನ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಶುಭಾಶಯ ಕೋರಿದ್ದಾರೆ. ಬುಧವಾರ ಸಂಜೆಯಿಂದಲೇ ರಂಜಾನ್‌ ಆಚರಣೆಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಲ್ಲೂ, ಇಡೀ ರಾತ್ರಿ ಮುಸ್ಲಿಂ ಬಾಂಧವರು ಜಾಗರಣೆ ಆಚರಿಸುವ ಮೂಲಕ ಗುರುವಾರ ಹಬ್ಬವನ್ನು ಅದ್ದೂರಿಯಾಗಿ ಬರ ಮಾಡಿಕೊಂಡರು. ನಂಜನಗೂಡಿನ ಎಂ.ಜಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.