ಬೆಳಗಾವಿ: ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಡ: ಡಿಸಿಎಂ ಪರಮೇಶ್ವರ ಹೇಳಿಕೆ
ಬೆಳಗಾವಿಯಲ್ಲಿ ಡಿಸಿಎಂ ಜಿ ಪರಮೇಶ್ವರ ಅವರು ಬರ ಪರಿಹಾರ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 18 ಸಾವಿರ ಕೋಟಿ ಹಾನಿಯಾಗಿದ್ದು, 3500 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.