ಬೆಳಗಾವಿಯಲ್ಲಿ 42 ಗಂಟೆಗಳ ಕಾಲ ಅದ್ದೂರಿ ಗಣೇಶ ವಿಸರ್ಜನೆ
ಬೆಳಗಾವಿಯಲ್ಲಿ ಸತತ 42 ಗಂಟೆಗಳ ಕಾಲ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಕಪಿಲೇಶ್ವರನ ಹೊಂಡದಲ್ಲಿ ಬೆಳಗಾವಿ ರಾಜ ಸೇರಿದಂತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಭಕ್ತಿಯಿಂದ ವಿಸರ್ಜಿಸಲಾಯಿತು. ಡಿಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ಸಂಪನ್ನವಾಯಿತು.