ಬೆಳಗಾವಿ: 42 ಗಂಟೆಗಳ ಕಾಲ ನಡೆದ ಐತಿಹಾಸಿಕ ಗಣೇಶ ವಿಸರ್ಜನಾ ಮೆರವಣಿಗೆ!
ಬೆಳಗಾವಿಯಲ್ಲಿ 42 ಗಂಟೆಗಳ ಕಾಲ ನಡೆದ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆ ಸಂಪನ್ನಗೊಂಡಿದೆ. ಸುಮಾರು 400ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ನಡೆದಿದ್ದು, ನಿರಂತರ 48 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದ ಪೊಲೀಸ್ ಮತ್ತು ಪಾಲಿಕೆ ಸಿಬ್ಬಂದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.