ಬೆಳಗಾವಿ: ವಿಟಿಯು ಘಟಿಕೋತ್ಸವ: ಸರ್ಕಾರದ ಆದೇಶ ಮೀರಿ ಪೂರ್ಣ ವಂದೇ ಮಾತರಂ ಹಾಡಿಸಿದ ರಾಜ್ಯಪಾಲರು
ವಿಟಿಯು 26ನೇ ಘಟಿಕೋತ್ಸವದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣ ಚರಣದೊಂದಿಗೆ ಹಾಡಲಾಗಿದೆ. ಗೀತೆಯನ್ನು ಎರಡು ಚರಣಕ್ಕೆ ಸೀಮಿತಗೊಳಿಸಿದ್ದ ಸರ್ಕಾರದ ಆದೇಶಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಪಾಲರ ಸೂಚನೆ ಮೇರೆಗೆ ವಿಟಿಯು ಪೂರ್ಣ ಗೀತೆಯನ್ನು ಹಾಡಿಸಿದೆ.