ಮಂಗಳೂರು: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ 75 ವರ್ಷಗಳ ಬಳಿಕ ಕಳಿಯಾಟ ಮಹೋತ್ಸವ: ಸಮಿತಿ ರಚನೆ
ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ 2027ರಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವದ ಪೂರ್ವಭಾವಿ ಸಮಿತಿಯನ್ನು ರಚಿಸಲಾಗಿದೆ. 75 ವರ್ಷಗಳ ಬಳಿಕ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಶಾಸಕ ವೇದವ್ಯಾಸ ಕಾಮತ್ ಸಹಕಾರ ಕೋರಿದ್ದಾರೆ. ಸಭೆಯಲ್ಲಿ ಕ್ಷೇತ್ರದ ಮೊಕ್ತೇಸರರು ಹಾಗೂ ಗಣ್ಯರು ಉಪಸ್ಥಿತರಿದ್ದರು.