ಉಡುಪಿ: ಮಣಿಪಾಲ ಆಸ್ಪತ್ರೆ: 4ನೇ ಮಹಡಿಯಿಂದ ಕೆಳಗೆ ಬಿದ್ದ ರೋಗಿ
Udupi, Udupi | Sep 30, 2026 ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೀರ್ಥಹಳ್ಳಿಯ ರಾಜೇಶ್ ಆರ್. ಶೆಟ್ಟಿ ಎಂಬವರು 4ನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಟಕಿಯ ಮೂಲಕ ಹೊರಬರಲು ಯತ್ನಿಸಿದಾಗ ಅವರು ಕೆಳಗೆ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.