ಮಡಿಕೇರಿ: ಸುಂಟಿಕೊಪ್ಪದಲ್ಲಿ ಸೈಬರ್ ಅಂಗಡಿ ಮತ್ತು ಬ್ಯೂಟಿ ಪಾರ್ಲರ್‌ಗೆ ಕಳ್ಳರ ದಾಳಿ
ಸುಂಟಿಕೊಪ್ಪ ಶ್ರೀರಾಮ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ರಾತ್ರಿ ಕಳ್ಳರು ತಿರುಮೂರ್ತಿ ಸೈಬರ್ ಅಂಗಡಿಗೆ ನುಗ್ಗಿ 10 ಸಾವಿರದಿಂದ 15 ಸಾವಿರ ರೂ. ಕದ್ದರು. ಬ್ಯೂಟಿ ಪಾರ್ಲರ್‌ಗೆ ಕಳ್ಳರು ಹೋಗಿದ್ರೂ ಹಣ ಅಥವಾ ವಸ್ತು ಸಿಕ್ಕಲಿಲ್ಲ. ಗದ್ದೆ ಹಳ್ಳದಲ್ಲಿನ ವಂದನ ಬಾರ್‌ಗೆ ಸಹ ಭಾನುವಾರ ಕಳ್ಳತನ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.