ಚಿಕ್ಕನಾಯಕನಹಳ್ಳಿ: ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಕುಸಿದ ITI ಕಾಲೇಜು ಕಾಂಪೌಂಡ್ ಗೋಡೆ
ಚಿಕ್ಕನಾಯಕನಹಳ್ಳಿಯ ಹೊಯ್ಸಳಕಟ್ಟೆಯಲ್ಲಿ ನೂತನ ಸರ್ಕಾರಿ ITI ಕಾಲೇಜಿನ ಕಾಂಪೌಂಡ್ ಗೋಡೆ ಮಳೆಗೆ ಕುಸಿದಿದೆ. ಕಳಪೆ ಕಾಮಗಾರಿ ಆರೋಪ ಕೇಳಿಬಂದಿದ್ದು, ಸೂಕ್ತ ತನಿಖೆ ನಡೆಸಿ ಮರುನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.