ಮಂಗಳೂರು: ಮಂಗಳೂರು MRPL ಬಳಿ ಭಾರೀ ಸ್ಫೋಟ: ಮನೆ, ಕಟ್ಟಡಗಳಿಗೆ ಹಾನಿ
ಮಂಗಳೂರಿನ ಎಂಆರ್ಪಿಎಲ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಜೋಕಟ್ಟೆ ಪಂಚಾಯತ್ ಕಟ್ಟಡ, ಮನೆಗಳು ಕಂಪಿಸಿ ಹಾನಿಗೀಡಾಗಿವೆ. ಬಜಪೆ ಸುತ್ತಮುತ್ತ ಕಂಪನದ ಅನುಭವವಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ.