ಪಾವಗಡ: ವಿದ್ಯುತ್ ಕಂಬದಿಂದ ಬಿದ್ದು ಲೈನ್ಮ್ಯಾನ್ಗೆ ಗಂಭೀರ ಗಾಯ, ಚಿಕಿತ್ಸೆಗೆ ಪರದಾಟ
ಪಾವಗಡ ಕೆಪಿಟಿಸಿಎಲ್ನಲ್ಲಿ ನಿರ್ವಹಣಾ ಕಾಮಗಾರಿ ವೇಳೆ 9 ಅಡಿ ಎತ್ತರದ ಕಂಬದಿಂದ ಬಿದ್ದು ಲೈನ್ಮ್ಯಾನ್ ಮಲ್ಲಿಕಾರ್ಜುನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆನ್ನುಮೂಳೆ, ಕುತ್ತಿಗೆ ಹಾಗೂ ಭುಜಕ್ಕೆ ಪೆಟ್ಟಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.