ಹಾಸನ: ಗಾರ್ಮೆಂಟ್ ಕಾರ್ಮಿಕರ ವೇತನ ಮತ್ತು ಇಪಿಎಫ್ ಸಮಸ್ಯೆ ಪರಿಹಾರಕ್ಕೆ ಸಂಸದ ಶ್ರೇಯಸ್ ಮನವಿ
Hassan, Hassan | Sep 30, 2026 ಹಾಸನದ ಗಾರ್ಮೆಂಟ್ ಹಾಗೂ ಟೈಲರಿಂಗ್ ಕಾರ್ಮಿಕರ ವೇತನ, ತುಟ್ಟಿ ಭತ್ಯೆ ಮತ್ತು ಇಪಿಎಫ್ ಸಮಸ್ಯೆಗಳಿಗೆ ಪರಿಹಾರ ಕೋರಿ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಾಸನದಲ್ಲಿ ಇಪಿಎಫ್ಒ ಶಿಬಿರ ಆಯೋಜಿಸುವಂತೆಯೂ ಒತ್ತಾಯಿಸಿದ್ದಾರೆ.