ರಾಮನಗರ: ಅವ್ವೇರಹಳ್ಳಿ ಕೆಪಿಎಸ್ ಶಾಲೆ ಅಭಿವೃದ್ಧಿ: ಶಾಸಕ ಇಕ್ಬಾಲ್ ಹುಸೇನ್ ವಿಶೇಷ ಕ್ರಮ
ರಾಮನಗರದ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಟೊಯೋಟಾ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ನವೀಕರಿಸಲಾಗಿದೆ. ಶಾಸಕ ಹೆಚ್. ಎ. ಇಕ್ಬಾಲ್ ಹುಸೇನ್ ಅವರ ಮುತುವರ್ಜಿಯಿಂದ ಕಾಮಗಾರಿ ಪೂರ್ಣಗೊಂಡಿದ್ದು, ಶಾಲೆಯ 400 ಮಕ್ಕಳಿಗೆ ತಲಾ ಎರಡು ಜೊತೆ ಟ್ರ್ಯಾಕ್ ಸೂಟ್ಗಳನ್ನು ವಿತರಿಸಲಾಗುತ್ತಿದೆ.