ಚಿಕ್ಕೋಡಿ: ಚಿಕ್ಕೋಡಿ ಫಿಲ್ಟರ್ ಹೌಸ್ ಮೇಲೆ ಉಪ ಲೋಕಾಯುಕ್ತರ ದಾಳಿ: ಅಧಿಕಾರಿಗಳಿಗೆ ತರಾಟೆ
ಚಿಕ್ಕೋಡಿಯ ಕುಡಿಯುವ ನೀರಿನ ಫಿಲ್ಟರ್ ಹೌಸ್ಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಕದಲ್ಲಿ ಕಂಡುಬಂದ ಅಶುಚಿತ್ವ ಮತ್ತು ಅವ್ಯವಸ್ಥೆ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.